 ಚಿತ್ರ: ಸನಾದಿ ಅಪ್ಪಣ್ಣ
 ಸಾಹಿತ್ಯ: ಚಿ.ಉದಯಶಂಕರ್
 ಗಾಯನ: ಎಸ್.ಜಾನಕಿ
 ಶಹನಾಯಿ ವಾದನ:  ಉಸ್ತಾದ್ ಬಿಸ್ಮಿಲ್ಲಾ ಖಾನ್ 
 ಸಂಗೀತ: ಜಿ.ಕೆ.ವೆಂಕಟೇಶ್

ಆ ಹಾ
ಕರೆದರೂ ಕೇಳದೆ ಸುಂದರನೇ
ಏಕೆ ನನ್ನಲ್ಲಿ ಈ ಮೌನ 
ಕರೆದರೂ ಕೇಳದೆ ಸುಂದರನೇ
ಏಕೆ ನನ್ನಲ್ಲಿ ಈ ಮೌನ  ||ಪಲ್ಲವಿ||

ಸದಾ ನನ್ನ ಕಣ್ಣ ತುಂಬ ಈ ನಿನ್ನ ಬಿಂಬ |೨|
ನಿನ್ನಾಸೆಯಿಂದ ಕಾಣಲೆಂದು ಓಡಿ ಬಂದಾಗ |೨|
ನೋಡದೆ, ಸೇರದೆ..
ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೆ
ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೇ

ಈ ನನ್ನ ಅಂದ ಚಂದ ನೀ ಕಾಣಲೆಂದೇ |೨|
ಈ ನನ್ನ ಗಾನ ಧ್ಯಾನ ನಿನ್ನ ಸೇವೆಗೆಂದೆ
ಹೂವಾಗಿ ಇಂದು ನಿನ್ನ ಪಾದ ಸೇರೆ ಬಂದಾಗ
ಒಲ್ಲದೇ ನಿಲ್ಲದೇ
ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೆ
ಪರಶಿವನೇ 
ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೆ

ವರ್ಗ:ಕನ್ನಡ ಚಿತ್ರಸಾಹಿತ್ಯ
ವರ್ಗ: ಸನಾದಿ ಅಪ್ಪಣ್ಣ ಚಿತ್ರ
ವರ್ಗ:ಚಿ.ಉದಯಶಂಕರ್ ಸಾಹಿತ್ಯವರ್ಗ:ಡಾ.ರಾಜ್‍ಕುಮಾರ್ ಗಾಯನ